Select Page

Date: September 7, 2021

ವಿಶ್ವ ಆತ್ಮಹತ್ಯೆ ತಡೆದಿನಾಚರಣೆ
ದಿನಾಂಕ 07.09.2021 ರಂದು ಕಮಲ್, ಎ. ಬಾಳಿಗಾ  ಚಾರಿಟೇಬಲ್ ಟ್ರಸ್ಟ್, ಮುಂಬಾಯಿ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ಮನೋವೈದ್ಯಕೀಯ ಸಂಘ ದಕ್ಷಿಣ ಪ್ರಾಂತ್ಯ ಘಟಕ  ಹಾಗೂ ಉಡುಪಿ ಮನೋವೈದ್ಯಕೀಯ ಸಂಘದ ಸಹಯೋಗದಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯನ್ನು ಆಯೋಜಿಸಲಾಯಿತು. ಡಾ. ರವೀಂದ್ರ ಮನೋಳಿ, ಸಹಪ್ರಧ್ಯಾಪಕರು,ಮಾನಸಿಕ ಆರೋಗ್ಯ ವಿಭಾಗ, ಕೆ,ಎಂ.ಸಿ. ಮಣಿಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ವರ್ಷವಿಡೀ ಇದರ ಅನುಷ್ಠಾನವಾಗಬೇಕು ಅಗಾಗ ಇಂತಹ ದಿನಗಳ ಆಚರಣೆಗೆ ಅರ್ಥ ದೊರಕುತ್ತದೆ,ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ.ಭಂಡಾರಿಯವರು ತಮ್ಮ ಅಧ್ಯಕ್ಷತೆ ಭಾಷಣದಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆ ,ಹೆತ್ತವರು, ಮಾಧ್ಯಮ ,ವೈದ್ಯರು ಎಲ್ಲರೂ ಎಚ್ಚೆತ್ತರೆ ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನ ಸಾಧ್ಯವೆಂದು ತಿಳಿಸಿದರು. ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಕುರಿತು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ರಾಜಕೇಸರಿ ಸಂಘಟನೆ ಬಂಟ್ಟಾಳ ಇವರ ಜಂಟಿ ಆಶ್ರಯದಲ್ಲಿ  ದೂರ ಸಂವಹನ ವೀಡಿಯೋ ಭಾಷಣ ಸ್ಪರ್ಧೆ ಆಯೋಜಿಸಿದ್ದು, 30 ಕ್ಕೂ ಹೆಚ್ಚು ವೀಡಿಯೋಗಳು ವಿವಿಧ ಜಿಲ್ಲೆಗಳಿಂದ ಬಂದಿದ್ದವು ಅದರಲ್ಲಿ ಉತ್ತಮ ಸಂದೇಶ ನೀಡಿದ ಶ್ರೀಮತಿ. ವಿಮಲಾ ತೇಜಾಕ್ಷಿ, ಪ್ರಥಮ, ಶ್ರೀಮತಿ ಧವಳಾ ಜೈನ್ ಬಂಟ್ವಾಳ ದ್ವಿತೀಯಾ, ಕು.ಆರುಂಧತಿ ಸಾಲಿಗ್ರಾಮ ತೃತೀಯ ಸ್ಥಾನವನ್ನು ಪಡೆದರು.
ಸಂಸ್ಥೆಯ ಮನಃಶಾಸ್ತ್ರಜ್ಞರಾದ  ಶ್ರೀ, ನಾಗರಾಜ್ ಮೂರ್ತಿಯವರು, ತೀವ್ರತರಹದ ಖಿನ್ನತೆ ಮತ್ತು ಆತ್ಮಹತ್ಯೆ ಆಲೋಚನೆ ಇರುವವರಿಗೆ ನೀಡುವ ವಿದ್ಯುತ್ ಕಂಪನ ಚಿಕಿತ್ಸೆ ಕುರಿತು ಮಾಹಿತಿಯನ್ನು ಸಭಾಕಾರ್ಯಕ್ರಮದಲ್ಲಿ ನೀಡಿದರು, ಸಭಾ ಕಾರ್ಯಕ್ರಮದ ನಂತರ ಉಡುಪಿಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತು ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು. ,ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು,.ಸಮುದಾಯ ಕಾರ್ಯಕರ್ತ ಸುರೇಶ್ ಎಸ್. ನಾವೂರ್ ವಂದಿಸಿದರು, ಆಪ್ತಸಮಾಲೋಚಕ ಲೋಹಿತ್ ಕಾರ್ಯಕ್ರಮವನ್ನು ನಿರೂಪಿಸಿದರು