Select Page

Date: December 4, 2021

ದಿನಾಂಕ 30.11.2021 ರಂದು  ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣ್ಣಗುಡ್ಡೆ ಉಡುಪಿ  ಹಾಗೂ ಲಯನ್ಸ್ ಕ್ಲಬ್ ಬೆಳ್ಮಣ್ ಸಂಚುರಿ ವತಿಯಿಂದ ಸಂತ ಜೋನ್ ರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೆಳ್ಮಣ್ ನಲ್ಲಿ ಹದಿಯರೆದ ಸಮಸ್ಯೆಗಳು ಮಾದಕ ಹಾಗೂ ಮದ್ಯ ವ್ಯಸನ, ಮೊಬೈಲ್ ಬಳಕೆಯ ದುರುಪಯೋಗ ಈ ವಿಚಾರದ ಬಗ್ಗೆ ಜಾಗೃತಿಯ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು ಡಾ.ಎ.ವಿ..ಬಾಳಿಗ ಸ್ಮಾರಕ ಆಸ್ಪತ್ರೆಯ  ಆಡಳಿತಾಧಿಕಾರಿಣಿ ಶ್ರೀಮತಿ ಸೌಜನ್ಯ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದವರು. ಸಂಚುರಿ ಬೆಳ್ಮಣ್ ಇದರ ಅಧ್ಯಕ್ಷರಾದ   ಶ್ರೀಮತಿ ಸಂಧ್ಯಾ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಲೆಡ್ವಿನ್ ಅರನ್ನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ
ಬೆಳ್ಮಣ್ ಸೆಂಚುರಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಪಾಟ್ಕರ್ ಹಾಗೂ ಸದಸ್ಯರು ಹಾಗೂ  ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಸಮುದಾಯ ಕಾರ್ಯಕರ್ತರಾದ ಶ್ರೀ. ಸುರೇಶ್.ಎಸ್‌ ನಾವೂರು ಉಪಸ್ಥಿತಿ ಇದ್ದರು.  ಲಯನ್ಸ್ ಕ್ಲಬ್ ನ  ಜಿಲ್ಲಾ ಗವರ್ನರ್ ಶ್ರೀ. ಎನ್.ಎಮ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ದಿನಾಂಕ ೦೪.೧೨.೨೦೨೧ ರಂದು ಸಂಜೀವಿನಿ ಸ್ವಸಹಾಯ ಸಂಘ ಕೇರ್ವಾಶೆ ಹಾಗೂ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಸಮುದಾಯ ಆರೋಗ್ಯ ವಿಭಾಗದ ವತಿಯಿಂದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಈ ವಿಷಯದ ಬಗ್ಗೆ ಸಂಜೀವಿನಿ ಸ್ವಸಹಾಯ ಸಂಘದ  ಅಧ್ಯಕ್ಷರಾದ  ಶ್ರೀಮತಿ ಸುಮಮಾಲಿನಿ ಇವರ ಅಧ್ಯಕ್ಷತೆಯಲ್ಲಿ ಮಾಹಿತಿ ಕಾರ್ಯಕ್ರಮ ಕೇರ್ವಾಶೆಯಲ್ಲಿ ನಡೆಯಿತು  ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಸಮುದಾಯ ಕಾರ್ಯಕರ್ತರಾದ ಶ್ರೀಸುರೇಶ್ ಎಸ್. ನಾವೂರ್ ರವರು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಕುರಿತು.ಮಾಹಿತಿಯನ್ನು ನೀಡಿದರು.  ಸಂಜೀವಿನಿ ಸ್ವಸಹಾಯ ಸಂಘದ  ಮುಖ್ಯ ಪುಸ್ತಕ ಬರಹಗಾರರು ಶ್ರೀಮತಿ ಭವ್ಯ ಇವರು ಕಾರ್ಯಕ್ರಮ ನಿರ್ವಹಿಸಿದರು.